- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
- For event updates, join the telegram group.
ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ
ಧನ್ಯವಾದಗಳು
ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರೊಂದಿಗೆ 15ನೇ ಸೆಪ್ಟೆಂಬರ್ 2023ರಂದು ಪೀಠಿಕೆಯನ್ನು ಓದಲು ನೋಂದಾಯಿಸಿದ 2,31,66,401 ಜನರಿಗೆ ನಮ್ಮ ಧನ್ಯವಾದಗಳು.. ನಾವು ಈಗ ಅಧಿಕೃತವಾಗಿ ವಿಶ್ವ ದಾಖಲೆಯನ್ನು ರಚಿಸಿದ್ದೇವೆ.
ವಿಶ್ವ ದಾಖಲೆಯ ಭಾಗವಾಗಲು ಬನ್ನಿ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಪೀಠಿಕೆಯೊಂದಿಗಿನ ನಿಮ್ಮ ಸೆಲ್ಫಿಯನ್ನು ಅಪ್ಲೋಡ್ ಮಾಡಿ.
ಕರ್ನಾಟಕ ಸರ್ಕಾರವು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಿತು. ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸುಮಾರು 54 ದೇಶಗಳ ಜನರು ಮತ್ತು ಭಾರತದ ಎಲ್ಲಾ ,30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಜನರು ಈ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಲ್ಲಿ ಪಾಲ್ಗೊಂಡು ಸಂವಿಧಾನದ ಪೀಠಿಕೆಯನ್ನು ಓದಿದರು.
ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಜರುಗಿದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್, ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಹಾಗೂ ಹಲವು ಸಂಪುಟ ಸಚಿವರು ಇದರಲ್ಲಿ ಭಾಗವಹಿಸಿದ್ದರು. ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಈ ಕಾರ್ಯಕ್ರಮವನ್ನಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಇದೇ ವೇಳೆ ವಿವಿಧ 20 ದೇಶಗಳಲ್ಲಿರುವ ಭಾರತೀಯರು, ಭಾರತದ 507 ಜಿಲ್ಲೆಗಳ ಮತ್ತು ಕರ್ನಾಟಕದ 31 ಜಿಲ್ಲೆಯ ಜನರು ಆನ್ ಲೈನ್ ಮುಖಾಂತರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಜಗತ್ತಿನಾದ್ಯಂತ 84 ದೇಶದ ಒಟ್ಟು 2,31,66,401 ಜನರು ನೊಂದಾಯಿಸಿಕೊಂಡಿದ್ದು ಇದು ಲಂಡನ್ ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿ ಅಲ್ಲಿಂದ ಪ್ರಮಾಣ ಪತ್ರವೂ ಕೂಡಾ ಸರ್ಕಾರಕ್ಕೆ ದೊರೆತಿದೆ ಎಂದು ತಿಳಿಸಲು ನಮಗೆ ಹೆಮ್ಮೆ ಅನಿಸುತ್ತದೆ.
ವಿಧಾನಸೌಧದ ಮುಂದೆ ಜರುಗಿದ ಕಾರ್ಯಕ್ರಮದಲ್ಲಿ ಸುಮಾರು 10000 ಜನರು ಹಾಗೂ ಹಲವು ಸಂಸ್ಥೆಗಳು ಮತ್ತು NGO ಗಳು ಪಾಲ್ಗೊಂಡಿದ್ದವು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಈ ಪೈಕಿ ” ಸಮಾನತೆ” ಮೊಬೈಲ್ ಅಪ್ಲಿಕೇಶನ್ ಗೆ ಚಾಲನೆ ನೀಡಿದ್ದು ಈ ಅಪ್ಲಿಕೇಷನ್ ಅಡಿಯಲ್ಲಿ ಶೋಷಿತ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಎರಡನೆಯದಾಗಿ ಕರ್ನಾಟಕದ ಸುಮಾರು 500 ಶಾಲೆಗಳಲ್ಲಿ ” ಮಕ್ಕಳ ಸಂವಿಧಾನದ ಕ್ಲಬ್ ಗಳನ್ನೂ” ಸಹ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾನ್ಯ ಪರಿಶಿಷ್ಟ ಪಂಗಡ ಇಲಾಖೆಯ ಸಚಿವರಾದ ನಾಗೇಂದ್ರ ಅವರು ಸ್ವಾಗತ ಭಾಷಣವನ್ನು ಮಾಡಿದರು. ನಂತರದಲ್ಲಿ ಕಾರ್ಯಕ್ರಮದ ಮೂಲ ರುವಾರಿಗಳಾದ ಡಾ ಹೆಚ್ ಸಿ ಮಹದೇವಪ್ಪನವರು ಆರಂಭಿಕ ಮಾತುಗಳನ್ನು ಆಡಿ ಮಕ್ಕಳಿಗೆ ಸಂವಿಧಾನ ಪೀಠಿಕೆಯ ಮಹತ್ವವನ್ನು ತಿಳಿಸಿಕೊಟ್ಟರು. ದೇಶದ ಅಭಿವೃದ್ದಿಗೆ ಅಡಿಪಾಯವೇ ಈ ದೇಶದ ಸಂವಿಧಾನ ಪೀಠಿಕೆ ಮತ್ತು ಸಂವಿಧಾನ ಎಂಬ ಅಂಶಕ್ಕೆ ಅವರು ಹೆಚ್ಚಿನ ಒತ್ತು ನೀಡಿದರು.
ಇನ್ನು ಈ ಐತಿಹಾಸಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ದೇಶದ ಎಲ್ಲ ಜನರಿಗೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಶುಭಾಶಯವನ್ನು ಕೋರುತ್ತಾ “ ಪ್ರಜಾಪ್ರಭುತ್ವ ವ್ಯವಸ್ಥೆಯು ಭಾರತ ದೇಶದಲ್ಲಿ ಬುದ್ಧ ಬಸವರ ಕಾಲದಿಂದಲೂ ಇದೆ. ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪ ಜಾರಿಯಲ್ಲಿದ್ದು ಅಲ್ಲಮ ಪ್ರಭುಗಳು ಇದರ ಮುಖ್ಯಸ್ಥರಾಗಿದ್ದರು”. ಸಂವಿಧಾನ ಬರುವುದಕ್ಕೆ ಮುಂಚಿತವಾಗಿ ಭಾರತದಲ್ಲಿ ಗಣತಂತ್ರ ವ್ಯವಸ್ಥೆ ಜಾರಿಯಲ್ಲಿತ್ತು. ಸಂವಿಧಾನ ರಚನೆ ಆದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿ ಜಾರಿಯಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಜಾರಿಯಾದ ನಮ್ಮ ಸಂವಿಧಾನವು ಈ ದೇಶದ ಜನರಿಗೆ ಬದುಕುವ ಶಕ್ತಿ ಮತ್ತು ಭರವಸೆಯನ್ನು ನೀಡಿದೆ. ಸಂವಿಧಾನದ ರಚನಾ ಸಭೆಯ ಚರ್ಚೆಗಳನ್ನು ನಾವು ಗಮನಿಸಿದಾಗ, ಸಂವಿಧಾನದ ಪೀಠಿಕೆಯನ್ನು ರಚಿಸಿದ ಮಹನೀಯರು ನಮ್ಮ ದೇಶ, ಎಂತಹ ದೇಶ ಆಗಬೇಕು ಎಂದು ಬಯಸಿದ್ದರು ಎಂಬುದರ ಬಗ್ಗೆ ಸ್ಪಷ್ಟವಾದ ಚಿತ್ರಣ ನಮಗೆ ಸಿಗುತ್ತದೆ. ಈ ದೇಶಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ದೊರಕಿದಾಗ ಮಾತ್ರವೇ ನಮಗೆ ದೊರಕಿದ ಸ್ವಾತಂತ್ರ್ಯಕ್ಕೆ ಅರ್ಥ ಸಿಗುತ್ತದೆ ಎಂಬುದನ್ನು ಅವರು ಬಹಳಷ್ಟು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಈ ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ಚುನಾವಣಾ ಪ್ರಣಾಳಿಕೆಗಳಿಗೆ ಅನುಗುಣವಾಗಿ ಜನರಿಗೆ ಆಡಳಿತ ನೀಡುತ್ತಿದ್ದು ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಅವರು ತಿಳಿಸಿದರು. ಜೊತೆಗೆ ಪ್ರಜಾಪ್ರಭುತ್ವವನ್ನು ಕಡೆಗಣಿಸಿದರೆ ಮುಂದೆ ಮನುಸ್ಮೃತಿಯನ್ನು ಜಾರಿಗೆ ತರುವ ಜನರ ಬಗ್ಗೆ ಎಚ್ಚರಿಕೆಯನ್ನೂ ಅವರು ನೀಡಿದರು.
ಇನ್ನು ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಮಾತನಾಡಿ “ ಡಾ ಬಿ ಆರ್ ಅಂಬೇಡ್ಕರ್ ಅವರು ಕೊಟ್ಟ ಭಾರತದ ಸಂವಿಧಾನವನ್ನು ನಾವೆಲ್ಲರೂ ಪಾಲಿಸಬೇಕು. ನಮ್ಮ ದೇಶವು ಅಭಿವೃದ್ಧಿ ಹೊಂದಲು ಹಾಗೂ ಜನರ ಬದುಕು ಸುಧಾರಣೆ ಆಗಲು ಈ ದೇಶಕ್ಕೆ ಮಹತ್ವದ ಸಂವಿಧಾನವನ್ನು ರಚಿಸಿಕೊಟ್ಟು ಪುಣ್ಯಾತ್ಮ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳಬೇಕು” ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಸಂವಿಧಾನದ ಕ್ಲಬ್ ಅನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಉಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರು “ ಈ ದಿನ ವಿಶ್ವ ಪ್ರಜಾಪ್ರಭುತ್ವ ದಿನದಂದು ಸರ್ಕಾರದ ವತಿಯಿಂದ ಜರುತ್ತಿರುವ ಈ ಕಾರ್ಯಕ್ರಮವು ನಮ್ಮ ಯುವಕರು ಸಮುದಾಯದ ಸಬಲೀಕರಣ ಆಗುವ ದೃಷ್ಟಿಯಿಂದ ಒಂದು ಧೃಡ ಹೆಜ್ಜೆಯಾಗಿದೆ. ಶಿಕ್ಷಣದ ಮೂಲಕ ಯುವ ಜನರ ದನಿಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದ್ದು ಇದಕ್ಕೆ ಸಂವಿಧಾನವು ನಮಗೆ ಹೆಚ್ಚಿನ ಬಲ ತುಂಬಲಿದ್ದು ಇದು ಸಂವಿಧಾನ ದಿನದ ಸಂಕಲ್ಪವಾಗಿದೆ ಎಂದು ಅವರು ಹೇಳಿದರು.
ಮದ್ರಾಸ್ ಪ್ರಾಂತ್ಯದ ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಸಂಗೀತ ವಿಭಾಗವು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಿದರು.
ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಸಂಘಟಿಸಿ ಸಂವಿಧಾನದ ದನಿ ಮೊಳಗಲು ಕಾರಣರಾದರು. ಇದರ ಜೊತೆಗೆ BEL, HAL ನಂತಹ ಹಲವು ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಗಳು ಈ ಬೃಹತ್ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಭಾಗವಹಿಸಿದ್ದವು.
ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಸಂಘಟಿಸಿ ಸಂವಿಧಾನದ ದನಿ ಮೊಳಗಲು ಕಾರಣರಾದರು. ಇದರ ಜೊತೆಗೆ BEL, HAL ನಂತಹ ಹಲವು ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಗಳು ಈ ಬೃಹತ್ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಭಾಗವಹಿಸಿದ್ದವು.
ಇನ್ನು ಸತ್ಯಪಾಲ್ ಅವರ ನೇತೃತ್ವದ ಹ್ಯಾಮ್ ರೇಡಿಯೋ ಅಸೋಸಿಯೇಷನ್ ಬೆಂಗಳೂರು, ಇವರು ಕಮ್ಯುನಿಕೇಶನ್ ವಿಭಾಗವನ್ನು ನಿರ್ವಹಿಸಿದರು.
ವೆಬ್ ಸೈಟ್ ಮೂಲಕ ಸಂವಿಧಾನದ ಪೀಠಿಕೆ ಓದುವ ಜನರ ವೀಡಿಯೋಗಳನ್ನು ಅಪ್ಲೋಡ್ ಮಾಡುವ ಮತ್ತು ಈ ಸಂವಿಧಾನ ಪೀಠಿಕೆ ಓದಿದ 2.2 ಕೋಟಿ ಜನರಿಗೆ ಡಿಜಿಟಲ್ ಸರ್ಟಿಫಿಕೇಟ್ ಅನ್ನು ನೀಡುವ ಕೆಲಸವನ್ನು ನಿರ್ವಹಿಸುತ್ತಿದೆ.
ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ 30 ರ ಒಳಗಾಗಿ ವೆಬ್ ಸೈಟ್ ನಲ್ಲಿ ವೀಡಿಯೋ ಅಪ್ಲೋಡ್ ಮಾಡತಕ್ಕದ್ದು. ನವೆಂಬರ್ 1 ರ ನಂತರದಲ್ಲಿ ಡಿಜಿಟಲ್ ಸರ್ಟಿಫಿಕೇಟ್ ಗಳನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದು.
ನಮ್ಮ ಗಣ್ಯರ ಮಾತುಗಳನ್ನು ಆಲಿಸಿ
ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಾಧೀಶರು
ನ್ಯಾಯಮೂರ್ತಿ ಬಿ.ಪ್ರಸನ್ನ
ಶ್ರೀ. ಸಿದ್ದರಾಮಯ್ಯ
ಮುಖ್ಯಮಂತ್ರಿ
ಶ್ರೀ. ದ.ಕ. ಶಿವಕುಮಾರ್
ಉಪಮುಖ್ಯಮಂತ್ರಿ
ಡಾ|| ಎಚ್.ಸಿ. ಮಹದೇವಪ್ಪ
ಸಮಾಜ ಕಲ್ಯಾಣ ಸಚಿವರು
ಶ್ರೀ. ಎಂ ಬಿ ಪಾಟೀಲ್
ಸಚಿವರು, ಮೂಲಸೌಕರ್ಯ ಅಭಿವೃದ್ಧಿ
ಶ್ರೀ. ಎಂ.ಸಿ. ಸುಧಾಕರ್
ಸಂಪುಟ ಸಚಿವರು, ಉನ್ನತ ಶಿಕ್ಷಣ
ಶ್ರೀ. ಕೆ.ಎಚ್. ಮುನಿಯಪ್ಪ
ಸಂಪುಟ ಸಚಿವರು, ಆಹಾರ ಮತ್ತು ನಾಗರಿಕ ಸರಬರಾಜು
ಶ್ರೀ. ದಿನೇಶ್ ಗುಂಡೂರಾವ್
ಸಂಪುಟ ಸಚಿವರು
ಶ್ರೀ. ಎಸ್.ಸುರೇಶ್ ಕುಮಾರ್
ಶಾಸಕ, ರಾಜಾಜಿನಗರ
ಶ್ರೀ. ಪ್ರಶಾಂತ್ ಪ್ರಕಾಶ್
ಮಾಜಿ ಸಲಹೆಗಾರ, ಕರ್ನಾಟಕ ಸರ್ಕಾರ
ಸುಧೀರ್ ವೊಂಬಟ್ಕೆರೆ
ಮೇಜರ್ ಜನರಲ್
ನಿವಾಸಿ ಸಂಯೋಜಕರು
ವಿಶ್ವಸಂಸ್ಥೆ
ಡಾ॥ ಎಚ್ ಸಿ ಮಹಾದೇವಪ್ಪ
ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು
”ನಮ್ಮ ರಾಷ್ಟ್ರದ ಆಕಾಂಕ್ಷೆಗಳ ಪಾಲಕರಾಗಿ, ನಾವು ಭಾರತದ ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆ.
ಇದು ನ್ಯಾಯಯುತ ಮತ್ತು ಅಂತರ್ಗತ ಸಮಾಜದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಮಾರ್ಗದರ್ಶಿಯಾಗಿದೆ.
ಒಟ್ಟು ನೋಂದಣಿಗಳು
2,31,66,401
ಸಂವಿಧಾನ ಪೀಠಿಕೆಯನ್ನು ಪಠಿಸಲು ಅಗಾಧ ಸಂಖ್ಯೆಯ ನೋಂದಣಿಗಳು ನಮ್ಮ ವೈವಿಧ್ಯಮಯ ರಾಷ್ಟ್ರವನ್ನು ಒಂದುಗೂಡಿಸುವ ಅಡಿಪಾಯದ ಮೌಲ್ಯಗಳ ಕಡೆಗೆ ನಮ್ಮ ನಾಗರಿಕರ ಆಳವಾದ ಬೇರೂರಿರುವ ಗೌರವ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ವಿಡಿಯೋ ನೋಡಿ
ಮುನ್ನುಡಿಯನ್ನು ಪಠಿಸುವ ಬಗ್ಗೆ ನಾಗರಿಕರು ತಮ್ಮ ಆಲೋಚನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದು ಇಲ್ಲಿದೆ.
ಸಮಾಜ ಕಲ್ಯಾಣ ಇಲಾಖೆ
ಸಹಯೋಗದಲ್ಲಿ:
ಬುಡಕಟ್ಟು ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸಿಟಿ ಯೂನಿಯನ್ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಅವರ ಒಳಗೊಳ್ಳುವಿಕೆ ಮತ್ತು ಬೆಂಬಲಕ್ಕಾಗಿ ನಮ್ಮ ಧನ್ಯವಾದಗಳು.
© 2023 ಕರ್ನಾಟಕ ಸರ್ಕಾರ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. Designed by OnWhitePaper.